Swaroopa Education

" For transformation, development, inquest of and all for the love of this land "

ಕಲಿಕಾ ಪ್ರಾರಂಭೋತ್ಸವ

ಜೂನ್-೫ : ಮಂಗಳೂರಿನ ಗೋಪಾಡ್ಕರ್ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ವಿದ್ಯಾರ್ಥಿಗಳ ಕಲಿಕಾ ಪ್ರಾರಂಭೋತ್ಸವವು ವಿಶಿಷ್ಠ ರೀತಿಯಲ್ಲಿ ನಡೆಯಿತು. ಚಿತ್ರ ಕಲಾವಿದ ವೆಂಕಟೇಶ್ ಭಟ್ ಅವರು ಮುದ್ರಾ ಮತ್ತು ಯೋಗ ಎಂಬ ಪುಸ್ತಕದ ಒಂದು ಪ್ಯಾರಾವನ್ನು ಓದಿ ಹೇಳುವ ಮೂಲಕ ಈ ವರುಷದ ಚಟುವಟಿಕೆಗಳ ಉದ್ಘಾಟನೆ ಮಾಡಿದರು. ಲೀಡರ್‌ಶಿಪ್ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವುದು ಇಂದಿನ ಅಗತ್ಯವಿದೆ ಎಂದರು. ಅತಿಥಿಯಾಗಿ ಭಾಗವಹಿಸಿದ ಮುರಳೀಧರ ಹೆಜಮಾಡಿ ಅವರು ಕೇವಲ ಪಠ್ಯ ಪುಸ್ತಕಗಳ ಜ್ಞಾನ ಸಾಲದು. ಅದು ಎಲ್ಲಾ ಕಡೆ ಲಭ್ಯ. ಆದರೆ ಇತರ ಜೀವನ ಕೌಶಲಗಳನ್ನು ಮೈಗೂಡಿಸಿಕೊಳ್ಳಲು ಸಹಾಯ ಮಾಡುವ ಸ್ವರೂಪ-ಶಿಕ್ಷಣವನ್ನು ಪಡೆಯಿರಿ ಎಂದು ಸಲಹೆ ನೀಡಿದರು.

Reading fest (2)

Reading fest (3)

Reading fest (4)

Reading fest (5)

Reading fest (6)

Reading fest (7)

Reading fest (8)

Reading fest (1)

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆ ನಿರ್ದೇಶಕ ಗೋಪಾಡ್ಕರ್ ಅವರು ಕೇಂದ್ರದಲ್ಲಿ ಒಂದು ವಾರ ಪಠ್ಯೇತರ ಪುಸ್ತಕಗಳನ್ನು ಓದುವ ಹಬ್ಬ ನಡೆಯುವುದು ಆ ಬಳಿಕ ಮೂಲ ಶಿಕ್ಷಣ ಓದು-ಬರಹ ತಿದ್ದುವಿಕೆ, ಕಾಡಲಿ ಶಿಕ್ಷಣ, ರಂಗ ಚಟುವಟಿಕೆಗಳು ನಡೆಯಲಿವೆ. ಈ ಎಲ್ಲಾ ಪೂರ್ವ ಸಿದ್ಧತೆಗಳ ಬಳಿಕವೇ ಪಾಠ ಪುಸ್ತಕಗಳ ಅಧ್ಯಯನಕ್ಕೆ ಬರಲಾಗುವುದು ಎಂದು ತಿಳಿಸಿದರು. ಪ್ರಾಂಶುಪಾಲೆ ಸುಮಾಡ್ಕರ್ ವಂದನಾರ್ಪಣೆ ಗೈದರು.

Highslide for Wordpress Plugin